Best lines.
#
ಗೆಲುವು ಅಂದರೆ ಸೋಲದೇ ಇರೋದಲ್ಲ... ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸಮಪ೯ಕವಾಗಿ ಎದುರಿಸುತ್ತಾ ಬದುಕೋದು....
#
ನಾವು ತುಂಬಾ ಪ್ರೀತಿಸುವ ನಮ್ಮಿ೦ದ ಬಿಟ್ಟಿರಲಾಗದ ಸಂಬಂಧಗಳನ್ನ ಉಳಿಸಿಕೊಳ್ಳಲು ಹೊಂದಿಕೊಂಡು ಬದುಕಬೇಕು ಒಂದು ವೇಳೆ ಸಾಧ್ಯವಿಲ್ಲವಾದಾಗ ನಾವಾಗೆ ಬದುಕುವುದು ಒಳ್ಳೆಯದು.
#
ನಮ್ಮ ಹೊಟ್ಟೆ ತುಂಬಿದ್ದಾಗ ಇತರರ ಹಸಿವು ತಿಳಿಯಲ್ಲ ನಾವು ಕುಶೀಲಿದ್ದಾಗ ಅವರ ದುಃಖ ಕಾಣಲ್ಲ ಆದ್ರೆ...ನಮ್ಮ ಹಸಿವು ಕಷ್ಟ ಇತರರಿಗೆ ಅಥ೯ ಆಗ್ತಿಲ್ಲಂತ ಬೇಜಾರು ಮಾಡ್ಕೋತೀವಿ
#
ಸಮಯ ಕೆಲವರನ್ನ ಕಾಯಿಸುತ್ತಂತೆ ಇನ್ನು ಕೆಲವರನ್ನ ಪರೀಕ್ಷಿಸುತ್ತಂತೆ ಮತ್ತೆ ಕೆಲವರನ್ನು ಮೆರೆಸುತ್ತಂತೆ ಕೆಲವರನ್ನು ಸಮಾಧಾನಿಸುತ್ತಂತೆ ಕೆಲವರನ್ನು ಮಾತ್ರ ನಗಿಸುತ್ತಂತೆ.
#
ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳು ಬಂದರೆ ಮನದಲಿ ಕೋಪವ ತಾಳದೇ... ಸಮಾಧಾನಿಯಾಗಿರಬೇಕು. - ಅಕ್ಕಮಹಾದೇವಿ
#
ಪರಸ್ಪರ ರಹಸ್ಯವಿರದ ಪಾರದಶ೯ಕ ಸಂಬಂಧ ಮಾತ್ರ ಗಟ್ಟಿಯಾಗಿರುತ್ತೆ ಅನ್ನೋದು ನಿಜವಾದರೂ ಕೆಲವರು ಸಂಬಂಧವನ್ನ ಉಳಿಸಿಕೊಳ್ಳಕ್ಕಾಗಿ ಗುಟ್ಟನ್ನ ಮುಚ್ಚಿಡೋಕೆ ಹೆಣಗಾಡ್ತನೇ ಇರೋದು
#
ನಮಗೆ ಬಂದೆರುಗುವ ಸಂಕಷ್ಟದ ಪರಿಸ್ಥಿತಿಗಳಿಗೆ ಯಾರ ಶಾಪವೂ ಕಾರಣವಲ್ಲ ಯಾವ ದೇವರ ಕೋಪವೂ ಅಲ್ಲ ಕೋಪದ ಆವೇಶದಲ್ಲಿ ಅಮಾಯಕ ಮನಸುಗಳಿಗೆ ನೋವಾಗುವಂತೆ ನಾವೇ ಹಾಕಿದ ಶಾಪದ ಪಾಪ..
#
ನಿಂತರೆ ಕೇಳುವರು ನೀನೇಕೆ ನಿಂತೆ..? ಮಲಗಿದರೆ ಗೊಣಗುವರು ನಿನಗಿಲ್ಲ ಚಿಂತೆ..! ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ, ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ -ಕೆ.ಎಸ್.ನ
#
ನಮ್ಮನ್ನ ನಂಬಿದವರ ಅಸಹಾಯಕ ಪರಿಸ್ಥಿತಿಯನ್ನು ಅವಮಾನಿಸಿ ಅವರ ಅವಶ್ಯಕತೆಯೇ ಇಲ್ಲವೆಂಬಂತೆ ಹೀಯಾಳಿಸಿರುತ್ತೇವೆ ಆದರೆ ನಮ್ಮ ತಪ್ಪು ಅರಿವಾಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ
#
ಅಸಹಾಯಕತೆ ಅನ್ನೋದು ನಮ್ಮನ್ನು ಎಷ್ಟು ದುಬ೯ಲರನ್ನಾಗಿ ಮಾಡುತ್ತೇ೦ದ್ರೆ ಎಲ್ಲಾ ಇದ್ರೂ ಉಪಯೋಗಕ್ಕೆ ಬರಲ್ಲ ನಮ್ಮವರೂಂತ ಯಾರೂ ಇರಲ್ಲ ನಮ್ಮ ಯಾರಿಗೂ ಪರಿಸ್ಥಿತಿ ಅಥ೯ಆಗಲ್ಲ
#
ಓದಲು ಕಲಿತು ಪುಸ್ತಕ ಓದದವರಿಗೂ ಓದಲು ಬರದ ಅನಕ್ಷರಸ್ಥರಿಗೂ ವ್ಯತ್ಯಾಸವಿಲ್ಲ ನಾಲ್ಕು ಅಕ್ಷರ ಕಲಿತವರು ನಾಲ್ಕು ಪುಸ್ತಕಗಳನ್ನಾದರೂ ಓದಿದರೆ ನಾಲ್ಕು ದೇಶ ಸುತ್ತಿದಂತೆ...
#
ನಿನ್ನಂತೆ ನೀನಾಗು ನಿನ್ನನೀನರಿ ಮೊದಲು ಚನ್ನೆಂದು ದೊಡ್ಡವರ ಅನುಕರಿಸಬೇಡ ಏನಾಯ್ತು ಮರಿಕತ್ತೆ ? ಚನ್ನಿತ್ತು ಮುದ್ದಿತ್ತು ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ - ಬೀChi
#
ನಾವಾಡುವ ಮಾತು ನಾವ್ಯಾರೆಂದು ಹೇಳುತ್ತೆ ನಾವು ಯಾರ ಮುಂದೆ ಹೇಗೆ ಮಾತಾಡುತ್ತೇವೆ ಅನ್ನೋದು ನಮ್ಮ ಸಂಸ್ಕಾರವನ್ನು ತಿಳಿಸುತ್ತೆ ನಮ್ಮ ಮಾತಿನ ರೀತಿಯೇ ನಮ್ಮ ವ್ಯಕ್ತಿತ್ವ
#
ಇನ್ನೊಬ್ಬರ ಮೆಚ್ಚುಗೆಗಾಗೋ... ಅಥವಾ... ನಮ್ಮ ಆತ್ಮರತಿಗೋ... ನಾವಾಡುವ ಮಾತುಗಳು... ನಮ್ಮ ನಡವಳಿಕೆಯಲ್ಲೂ... ಇದ್ದರೆ ಮಾತ್ರ ಆ ಮಾತುಗಳಿಗೆ ಪ್ರಾಮುಖ್ಯತೆ ಬರುತ್ತದೆ.
#
ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮ ದೇವ. - ಬಸವಣ್ಣ
#
ಆಡದಲೆ ಮಾಡುವವನು ರೂಡಿಯೊಳಗುತ್ತಮನು ಆಡಿ ಮಾಡುವವನು ಮಧ್ಯಮನು ಅಧಮ ತಾನಾಡಿಯೂ ಮಾಡದವನು - ಸವ೯ಜ್ಞ
#
ಎಲ್ಲರನ್ನು ಯಾವಾಗಲೂ ಸುಳ್ಳು ಹೇಳಿ ನಂಬಿಸಬಹುರು ಅಂತ ಅನ್ಕೊಂಡರೆ ಅದು ಸುಳ್ಳು... ಒಂದು ಸಲ ಹೇಳುತ್ತಿರೋದು ಸುಳ್ಳು ಅಂತ ಗೊತ್ತಾದ್ರೇ... ನಿಜ ಹೇಳಿದ್ರೂ ಯಾರೂ ನಂಬಲ್ಲ.
#
ನಿದ್ದೆಯಲ್ಲೂ ಬೆಚ್ಚಿ ಬೀಳ್ತೀವಿ ಅಂದ್ರೆ ನಮ್ಮವರಿಂದ ಏನನ್ನೋ ಮುಚ್ಚಿಟ್ಟಿರ್ತೀವಿ ಪ್ರಜ್ಞಾವಸ್ಥೆಯಲ್ಲಿ ಬಚ್ಚಿಟ್ಟ ಗುಟ್ಟು ನಿದ್ರಾವಸ್ಥೆಯಲ್ಲಿ ದುಃಸ್ವಪ್ನವಾಗುತ್ತೆ...
#
ನಾವು ತೆಗೆದುಕೊಳ್ಳುವ ನಿಧಾ೯ರಗಳಲ್ಲಿ ನಿಖರತೆ ಇರಬೇಕು ಪದೇ ಪದೇ ನಮ್ಮ ತೀಮಾ೯ನಗಳು ಬದಲಾಗುತ್ತಿದ್ದರೆ ಇತರರಿಗೆ ನಮ್ಮ ಬಗ್ಗೆ ಬೇರೆಯದೇ ಅಭಿಪ್ರಾಯ ಬರುವ ಅಪಾಯವಿರುತ್ತದೆ.
#
ಯಾರ ಮಾತೂ ನಿಜ ಅಲ್ಲ ಯಾರ ಮಾತೂ ಸುಳ್ಳಲ್ಲ ಎಲ್ಲವೂ ಅನುಕೂಲಕ್ಕೆ ತಕ್ಕಂತೆ ಅವರವರ ಅಭಿಪ್ರಾಯ ಅಷ್ಟೇ. ಅವರು ಹೇಗೆ ಸಮಥಿ೯ಸಿಕೊಳ್ಳುತ್ತಾರೋ ಅದರ ಮೇಲೆ ನಿಧಾ೯ರವಾಗುತ್ತೆ...